ಬಿಗ್ ಬಾಸ್ ಕನ್ನಡ ಸೀಸನ್ 5 : ದಿವಾಕರ್ ಡಬಲ್ ಗೇಮ್ ಬಯಲು | Filmibeat Kannada

2017-12-28 1,999

Bigg Boss Kannada 5: Week 11: Diwakar's double game revealed. Sameer Acharya & Jayasreenivasan is playing in the secret room & watching all the contestants.

''ಎಲ್ಲರ ಮುಂದೆ ಇರುವಾಗ ಒಂದು ತರಹ, ಯಾರೂ ಇಲ್ಲದೆ ಇರುವಾಗ ಮತ್ತೊಂದು ತರಹ ನಡೆದುಕೊಳ್ಳುತ್ತಾರೆ'' ಎಂಬ ಕಾರಣ ಕೊಟ್ಟು ಮೊನ್ನೆಯಷ್ಟೇ ದಿವಾಕರ್ ರವರನ್ನ ರಿಯಾಝ್ ನಾಮಿನೇಟ್ ಮಾಡಿದರು.''ರಿಯಾಝ್ ಕೊಟ್ಟ ಕಾರಣ ಸರಿಯಿಲ್ಲ, ಡಬ್ಬ'' ಎನ್ನುತ್ತ ದಿವಾಕರ್ ಸಿಡಿದೆದ್ದಿದ್ದರು. ಅಂದು ರಿಯಾಝ್ ಹೇಳಿದ ಮಾತನ್ನ ಯಾರು ನಂಬಿದ್ರೋ ಬಿಟ್ರೋ... ಗೊತ್ತಿಲ್ಲ. ಆದ್ರೆ ಇಂದು ದಿವಾಕರ್ ನಡವಳಿಕೆ ನೋಡಿದ್ಮೇಲೆ, ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಅವರಿಗೆ ದಿವಾಕರ್ ರವರ 'ಡಬಲ್ ಗೇಮ್' ಅರ್ಥ ಆಗಿದೆ.ಇಡೀ ತಂಡ ನಿರ್ಧಾರ ಮಾಡುವಾಗ ಒಂದನ್ನು ಹೇಳಿ, ಕನ್ಫೆಶನ್ ರೂಮ್ ಒಳಗೆ ಹೋದ್ಮೇಲೆ ಮತ್ತೊಂದನ್ನು ಮಾಡಿದ ದಿವಾಕರ್ ಇದೀಗ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ರಿಯಾಝ್, ದಿವಾಕರ್ ರವರನ್ನ ನೇರವಾಗಿ ನಾಮಿನೇಟ್ ಮಾಡಿದರು. ದಿವಾಕರ್ ರವರನ್ನ ನಾಮಿನೇಟ್ ಮಾಡುವಾಗ, ''ಕಳೆದ ವಾರ ನನಗೆ ಬೆಸ್ಟ್ ಪರ್ಫಾಮರ್ ಪಟ್ಟ ಕೊಡಲು ಎಲ್ಲರೂ ಒಪ್ಪಿಕೊಂಡರು.